ಪೋಸ್ಟ್‌ಗಳು

 ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಬಾಂಗ್ಲಾದೇಶ ವಿರುದ್ದ ಮೂರನೇ ಮತ್ತು ನಿರ್ಣಾಯಕ ಏಕದಿನ ಪಂದ್ಯದಲ್ಲಿ ಅಫ್ಘಾನಿಸ್ತಾನ ಗೆಲುವು ಸಾಧಿಸಿದೆ. ಬಾಂಗ್ಲಾದೇಶ ವಿರುದ್ಧ 5 ವಿಕೆಟ್‌ಗಳಿಂದ ಅಫ್ಘಾನಿಸ್ತಾನ ಗೆದ್ದಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶದ ಪರ ಮಹಮ್ಮದುಲ್ಲಾ (98) ಮತ್ತು ಮೆಹದಿ ಹಸನ್ ಮಿರಾಜ್ (66) ಅರ್ಧಶತಕಗಳ ಬಾರಿಸಿದರು. ಇದರೊಂದಿಗೆ ಬಾಂಗ್ಲಾದೇಶ 8 ವಿಕೆಟ್‌ ನಷ್ಟಕ್ಕೆ 244 ರನ್ ಗಳಿಸಿತು. ಅಫ್ಘಾನಿಸ್ತಾನ ಪರ ಅಜ್ಮತುಲ್ಲಾ ಒಮರ್ಜಾಯ್ 4 ವಿಕೆಟ್ ಪಡೆದು ಮಿಂಚಿದರು. 245 ರನ್‌ಗಳ ಗುರಿ ಬೆನ್ನತ್ತಿದ ಅಫ್ಘಾನ್ ಪರ ರಹಮಾನುಲ್ಲಾ ಗುರ್ಬಾಜ್ ಭರ್ಜರಿ ಶತಕ ಬಾರಿಸಿ ಗೆಲುವು ತಂದು ಕೊಟ್ಟರು.        ರಹಮಾನುಲ್ಲಾ ಗುರ್ಬಾಜ್ ಆಡಿದ 120 ಎಸೆತಗಳಲ್ಲಿ 5 ಬೌಂಡರಿ ಮತ್ತು 7 ಸಿಕ್ಸರ್‌ಗಳ ನೆರವಿನಿಂದ 101 ರನ್‌ಗಳ ಕಲೆ ಹಾಕಿದರು. ಮತ್ತೊಂದೆಡೆ ಅಜ್ಮತುಲ್ಲಾ ಉಮರ್ಜಾಯ್ ಕೂಡ ಅಜೇಯ 70 ರನ್‌ಗಳ ಇನ್ನಿಂಗ್ಸ್ ಆಡಿದರು. ಈ ಇಬ್ಬರ ಅದ್ಭುತ ಇನ್ನಿಂಗ್ಸ್‌ನಿಂದಾಗಿ ಅಫ್ಘಾನಿಸ್ತಾನ ಅದ್ಭುತ ಗೆಲುವು ಸಾಧಿಸಿತು. ಅಫ್ಘಾನಿಸ್ತಾನ ತಂಡಕ್ಕೆ ಇದು ಸತತ ಮೂರನೇ ಏಕದಿನ ಸರಣಿ ಜಯವಾಗಿದೆ. ಈ ಮೊದಲು ದಕ್ಷಿಣ ಆಫ್ರಿಕಾ ತಂಡವನ್ನು 2-1 ಮತ್ತು ಐರ್ಲೆಂಡ್ ಅನ್ನು 2-0 ಅಂತರದಲ್ಲಿ ಅಫ್ಘಾನ್ ಸೋಲಿಸಿತು.           ರಹಮಾನುಲ್ಲಾ ಗುರ್ಬಾಜ್ ದಾಖಲೆ ಬಾಂಗ್ಲಾದೇಶ...

ಪಾಕಿಸ್ತಾನದ ವಿರುದ್ಧ ಸೋತಿದ್ದೇಕೆ ಬಲಿಷ್ಠ ಆಸ್ಟ್ರೇಲಿಯ?

 ಪಾಕಿಸ್ತಾನ ತಂಡವು ಆಸ್ಟ್ರೇಲಿಯಾದಲ್ಲಿ ಮೂರು ಪಂದ್ಯಗಳ ಏಕದಿನ ಸರಣಿಯನ್ನು 2-1 ಅಂತರದಲ್ಲಿ ಗೆದ್ದು ಐತಿಹಾಸಿಕ ಗೆಲುವು ಸಾಧಿಸಿದೆ. ಮೊಹಮ್ಮದ್ ರಿಜ್ವಾನ್ ನಾಯಕತ್ವದಲ್ಲಿ ಅದ್ಭುತ ಪ್ರದರ್ಶನ ನೀಡಿದ ಪಾಕಿಸ್ತಾನ, ಆಸ್ಟ್ರೇಲಿಯಾ ತಂಡವನ್ನು ಅದರ ತವರು ನೆಲದಲ್ಲಿಯೇ ಸೋಲಿಸಿದೆ. ಇತ್ತ ಆಸ್ಟ್ರೇಲಿಯಾ ಈ ಸರಣಿ ಸೋಲಿನೊಂದಿಗೆ ಅನೇಕ ಅವಮಾನಕರ ದಾಖಲೆಗಳಿಗೆ ಕೊರಳ್ಳೊಡಿದೆ ಆಸ್ಟ್ರೇಲಿಯಾದ ಏಕದಿನ ಕ್ರಿಕೆಟ್‌ನ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ತಂಡದ ಯಾವುದೇ ಬ್ಯಾಟ್ಸ್‌ಮನ್‌ಗಳು ಈ ಸರಣಿಯಲ್ಲಿ 50 ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸಲು ಸಾಧ್ಯವಾಗಲಿಲ್ಲ. ಪಾಕಿಸ್ತಾನ ವಿರುದ್ಧದ ಈ ಮೂರು ಪಂದ್ಯಗಳ ಸರಣಿಯಲ್ಲಿ ಆಸ್ಟ್ರೇಲಿಯದ ಯಾವೊಬ್ಬ ಬ್ಯಾಟ್ಸ್‌ಮನ್ ಕೂಡ ಅರ್ಧಶತಕ ಬಾರಿಸಲಿಲ್ಲ. ಆಸೀಸ್ ಪರ ಜೋಶ್ ಇಂಗ್ಲಿಸ್ ಮಾತ್ರ ಗರಿಷ್ಠ 49 ರನ್‌ಗಳ ಇನ್ನಿಂಗ್ಸ್‌ ಆಡಿದರು. ಇದಲ್ಲದೆ ಮೂರನೇ ಏಕದಿನ ಪಂದ್ಯದಲ್ಲಿ ಕೇವಲ 140 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಆಸೀಸ್ ಪಡೆ, ಪಾಕಿಸ್ತಾನ ವಿರುದ್ಧ ಏಕದಿನ ಸರಣಿಯಲ್ಲಿ ಇದೇ ಮೊದಲ ಬಾರಿಗೆ ಅತ್ಯಂತ ಕಡಿಮೆ ಸ್ಕೋರ್ ದಾಖಲಿಸಿದ ಬೇಡದ ದಾಖಲೆಗೆ ಕೊರಳ್ಳೊಡಿದೆ. ಅಷ್ಟೇ ಅಲ್ಲ, ಎರಡನೇ ಏಕದಿನ ಪಂದ್ಯದಲ್ಲಿ ಆತಿಥೇಯ ತಂಡ 163 ರನ್‌ಗಳಿಗೆ ಆಲೌಟ್ ಆಗಿದ್ದು, ಪಾಕಿಸ್ತಾನ ವಿರುದ್ಧದ ಏಕದಿನ ಸರಣಿಯಲ್ಲಿ ಆಸ್ಟ್ರೇಲಿಯಾದ ಎರಡನೇ ಅತಿ ಕಡಿಮೆ ಸ್ಕೋರ್ ಇದಾಗಿದೆ. ಇದರ ಜೊತೆಗೆ ಆಸ್ಟ್ರೇಲಿಯಾ ವಿರುದ್ಧದ ಈ ಸರಣಿಯಲ್ಲಿ ಪಾ...
 Join with us  Hello everyone,  today I'm going to publish my new blogspot about cricket